ಮಕ್ಕಳ ಗ್ರಾಮಸಭೆ: ರಾಜ್ಯ, ರಾಷ್ಟ್ರ ಮಟ್ಟದ ಸಾಧಕರಿಗೆ ಗೌರವಸುಂಟಿಕೊಪ್ಪದ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಗೌರವ ಸಮರ್ಪಣೆ ನಡೆಯಿತು. ಶಾಲೆಯ ಮುಖ್ಯೋಪಾದ್ಯಾಯನಿ ಮೇರಿಫಾತೀಮಾ ಅವರು ರಾಜ್ಯ ಮಟ್ಟದ ಉತ್ತಮ ಮುಖ್ಯೋಪಾದ್ಯಾಯನಿ ಪ್ರಶಸ್ತಿಗೆ ಭಾಜನರಾಗಿದ್ದು, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 8ನೇ ತರಗತಿಯ ಬಾಲವಿಜ್ಞಾನಿ ಎ.ಎಸ್.ಶ್ರೀಶಾ ಇತ್ತೀಚೆಗೆ ನಡೆದ ರಾಜ್ಯಮಟ್ಟದ ‘ಬಾಲವಿಜ್ಞಾನ’ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಗೌರವಿಸಲಾಯಿತು.