ಸರ್ಕಾರ ಪೆಟ್ರೋಲ್- ಡಿಸೇಲ್ ಬೆಲೆಯೇರಿಕೆ ಹಿಂಪಡೆಯಲಿ: ಆರ್.ಅಶೋಕ್ಹಾಲಿನ ದರವನ್ನು ವರ್ಷದೊಳಗೆ ೨ ಬಾರಿ ಏರಿಕೆ ಮಾಡಿದೆ, ಉಚಿತ ವಿದ್ಯುತ್ ನೀಡಿ, ವಿದ್ಯುತ್ ದರವನ್ನು ಹಲವಾರು ಬಾರಿ ಏರಿಕೆ ಮಾಡಿದೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ ಡಿಸೇಲ್- ಪೆಟ್ರೋಲ್ ದರ ಏರಿಕೆ ಮಾಡಿದೆ, ೧೦ ಕೆಜಿ ಅಕ್ಕಿ ಉಚಿತ ಎಂದು ಹೇಳಿತ್ತು, ಅದರೆ ಅದರಲ್ಲಿ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದಾಗಿದೆ, ೫ ಕೆಜಿ ಅಕ್ಕಿಯ ಹಣ ಸಮರ್ಪವಾಗಿ ನೀಡುತ್ತಿಲ್ಲ. ಮದ್ಯದ ಬೆಲೆ ಕ್ವಾರ್ಟರ್ ಗೆ ೫೦ ರು. ಏರಿಕೆ ಮಾಡಿದ್ದಾರೆ. ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳೂ ೨ ಸಾವಿರ ರು. ಜಮೆ ಮಾಡುವುದಾಗಿ ತಿಳಿಸಿ ಚುನಾವಣೆಯ ನಂತರ ಸಮರ್ಪಕವಾಗಿ ಜಮೆಯಾಗುತ್ತಿಲ್ಲ.