ಕೆರೆಗಳಲ್ಲಿ ನೀರು ತುಂಬಿದರೂ ಕೃಷಿಗೆ ನೀರಿಲ್ಲ ಕೋಲಾರ ಜಿಲ್ಲೆಯಾದ್ಯಂತ ಸುಮಾರು ೨೫೦೦ಕ್ಕೂ ಹೆಚ್ಚು ಕೆರೆಗಳಿದ್ದು ಇವುಗಳ ಅಡಿಯಲ್ಲಿ ಸುಮಾರು ೨.೫ ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿ ವ್ಯಾಪಿಸಿದೆ. ಹಿಂದಿನ ದಿನಗಳಲ್ಲಿ ಈ ಕೆರೆಗಳ ನೀರಿನಿಂದ ರೈತರು ಭತ್ತ, ಕಬ್ಬು, ರಾಗಿ, ಹುರುಳಿ, ತರಕಾರಿ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಳೆದ ೨೦ ವರ್ಷದಿಂದ ಕೆರೆಗಳಿಂದ ನೀರು ಬಿಡದ ಪರಿಣಾಮ ಕೆರೆ ಮತ್ತು ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ.