ಜಗತ್ತಿಗೆ ಅಹಿಂಸೆ, ಶಾಂತಿ ಸಾರಿದ ಜೈನ ಧರ್ಮ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಮುಟ್ಟುವಂತಾಗಬೇಕು. ಜೈನ ಧರ್ಮದಲ್ಲಿ ಮಹಾವೀರ, ಭರತ ಸೇರಿದಂತೆ ನೂರಾರು ಮಹಾಪುರುಷರು ಹುಟ್ಟಿ ಸಮಾಜಕ್ಕೆ ಉತ್ತಮ ವಿಚಾರಗಳನ್ನು ಸಾರಿದ್ದಾರೆ. ಅವು ಕೃತಿ, ಗ್ರಂಥ, ಓಲೆಗರಿಗಳಿಗೆ ಸೀಮಿತವಾಗದೆ ಪುಸ್ತಕ ರೂಪದಲ್ಲಿ ಬಂದು ಮಕ್ಕಳು ಓದುವಂತಾಗಬೇಕು.