ಸಾಧಕರಾಗಿ ಹೊರಹೊಮ್ಮಲು ದೃಢತೆ, ತ್ಯಾಗ ಬೆಳೆಸಿಕೊಳ್ಳಿ: ನಾಗೇಂದ್ರ ಪ್ರಸಾದ್ ಕರೆಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದಿರಿ, ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಬರವಣಿಗೆ ಉತ್ತಮಪಡಿಸಿಕೊಳ್ಳಿ, ನಿರಂತರ ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಇದು ನಿಮ್ಮ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ, ಅದಕ್ಕೆ ಹೆದರುವ ಅಗತ್ಯವಿಲ್ಲ, ಪರಿಶ್ರಮ ಹಾಕಿ ಓದಿರುವಾಗ ನೀವು ಧೈರ್ಯದಿಂದಲೇ ಪರೀಕ್ಷೆ ಎದುರಿಸಬಹುದು.