ಜನಪ್ರತಿನಿಧಿಗಳು ಗವಿಶ್ರೀ ವಹಿಸಿದ ಜವಾಬ್ದಾರಿ ಮರೆತರೇ?ಬಿಎಸ್ಪಿಎಲ್ ಕಾರ್ಖಾನೆ ವಿರೋಧಿಸಿ ಫೆ. 24ರಂದು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಲಾಗಿತ್ತು. ಈ ವೇಳೆ ಶ್ರೀಗಳು ಮಾತನಾಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರ್ಖಾನೆ ಅನುಮತಿ ರದ್ದು ಮಾಡಿಕೊಂಡು ಕೊಪ್ಪಳಕ್ಕೆ ಬರಬೇಕು ಹಾಗೂ ಇದಕ್ಕೆ ಎಲ್ಲ ಜನಪ್ರತಿನಿಧಿಗಳು ಸಾಥ್ ನೀಡಬೇಕೆಂದು ಹೇಳಿದ್ದರು.