ಲಕ್ಷ ಲಕ್ಷ ಭಕ್ತರು ಸೇರಿದ ಗವಿಮಠ ಜಾತ್ರೆ ಶಾಂತ ಶಾಂತಗವಿಸಿದ್ಧೇಶ್ವರ ಶ್ರೀಗಳು ಪರಿಸರ ಜಾಗೃತಿಯನ್ನೇ ತಮ್ಮ ಧ್ಯೇಯವಾಗಿ ಮಾಡಿಕೊಂಡಿರುವುದರಿಂದ ಜಾತ್ರೆಯಲ್ಲಿ ಸ್ವಚ್ಛತೆ ಅಷ್ಟೇ ಅಲ್ಲ, ಶಬ್ದಮಾಲಿನ್ಯ ನಿಯಂತ್ರಣಕ್ಕೂ ಒತ್ತು ನೀಡಿದ್ದಾರೆ. ಇದಕ್ಕಾಗಿ ಶ್ರೀಗಳು ಹಲವಾರು ಷರತ್ತುಗಳನ್ನು ವಿಧಿಸಿ ಶಬ್ದಮಾಲಿನ್ಯಕ್ಕೆ ಬ್ರೇಕ್ ಹಾಕಿದ್ದು, ಲಕ್ಷ ಲಕ್ಷ ಭಕ್ತರ ಮಧ್ಯೆಯೂ ಜನರು ಕರ್ಕಶ ಶಬ್ದ ಇಲ್ಲದೇ ನೆಮ್ಮದಿಯಿಂದ ಸುತ್ತಾಡುತ್ತಾರೆ.