ಗಂಗಾವತಿ ತಾತನ ಜಾತ್ರೆಗೆ ಕಾರಟಗಿ ಭಕ್ತರಿಂದ ೫ ಕ್ವಿಂಟಲ್ ಬೂಂದಿಲಾಡುಗಂಗಾವತಿ ಶ್ರೀ ಚನ್ನಬಸವಸ್ವಾಮಿ ತಾತನ ಜಾತ್ರೆಗೆ ಕಾರಟಗಿ ಪಟ್ಟಣದ ಭಕ್ತರು ಸಂಗ್ರಹಿಸಿದ ದವಸ-ಧಾನ್ಯ, ಇತರ ಪದಾರ್ಥಗಳನ್ನು ಶ್ರೀಮಠಕ್ಕೆ ಗುರುವಾರ ಕಳುಹಿಸಿ ಕೊಡಲಾಯಿತು. ಈ ವರ್ಷ ೫ ಕ್ವಿಂಟಲ್ ೩೧ ಕೆಜಿ ಬೂಂದಿ ಲಾಡು, ೫೦೦ ರೊಟ್ಟಿ ಮತ್ತು ಬಾಳೆಹಣ್ಣಿನ ಗೊನೆ ಕಳುಹಿಸಲಾಗಿದೆ.