ಎಪಿಎಂಸಿ ಮಾರುಕಟ್ಟೆ ಬಿಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಎಳನೀರು ಖರೀದಿ, ವರ್ತಕರು, ಹಮಾಲಿಗಳ ಪ್ರತಿಭಟನೆನಂತರ ಸ್ಥಳಕ್ಕೆ ಧಾವಿಸಿದ ಉಪ ನಿರ್ದೇಶಕಿ ರೇವತಿಬಾಯಿ ಪ್ರತಿಭಟನಾ ನಿರತ ವರ್ತಕರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ನಾಳೆಯಿಂದ ಮಾರುಕಟ್ಟೆ ವ್ಯಾಪ್ತಿಯ ಹೊರಗೆ ಎಳನೀರು ಖರೀದಿ ಮಾಡುವ, ಸಾಗಾಣಿಕೆ ಮಾಡುವ ವರ್ತಕರ ವಿರುದ್ಧ ಎಪಿಎಂಸಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.