ಬೇಸಿಗೆ ಶಿಬಿರ ಮಕ್ಕಳ ಪ್ರತಿಭೆ ಗುರುತಿಸಲು ಸಹಕಾರಿ: ಡಾ.ರಾಘವೇಂದ್ರಬೇಸಿಗೆ ಕ್ರೀಡಾ ಶಿಬಿರವು ಒಂದು ತಿಂಗಗಳ ಕಾಲ ನಡೆದಿದ್ದು, ಮುಖ್ಯವಾಗಿ ಕ್ರೀಡಾ ಶಿಬಿರದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲಾಗಿದೆ. ಪ್ರತಿಭಾವಂತ ಕ್ರೀಡೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇನ್ನು ಮತ್ತಷ್ಟು ತರಬೇತಿ ನೀಡಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಹಂಬಲದೊಂದಿಗೆ ಹಳ್ಳಿಗಳಲ್ಲಿ ಉಚಿತವಾಗಿ ಈ ಶಿಬಿರವನ್ನು ಆಯೋಜನೆ ಮಾಡಲಾಯಿತು.