ಮೈಸೂರು ವಿವಿ ಜೊತೆಗೆ ಮಂಡ್ಯ ವಿವಿ ವಿಲೀನ ಒಳ್ಳೆಯದು: ಮರಿತಿಬ್ಬೇಗೌಡವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಅಧ್ಯಯನ, ಉತ್ತಮ ಬೋಧನೆ, ಗುಣಮಟ್ಟದ ಸಂಶೋಧನೆ ವಿಶ್ವವಿದ್ಯಾಲಯಗಳಲ್ಲಿ ಬಹಳ ಮುಖ್ಯ. ಮೈಸೂರು ವಿಶ್ವವಿದ್ಯಾಲಯ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳ ಮಹಾಪೂರವೇ ಇಲ್ಲಿದೆ.