ಕನ್ನಡ ನಾಡನ್ನು ಕಟ್ಟಿದವರ ಸ್ಮರಣೆ ಅಗತ್ಯ : ನಿಂಗರಾಜ್ಗೌಡಈ ರಾಜರುಗಳೆಲ್ಲಾ ಕನ್ನಡ ನಾಡಿನ ಇತಿಹಾಸವನ್ನು ಉಜ್ವಲವಾಗಿ ಸೃಷ್ಟಿಸಿದರು. ಇಂತಹ ಮಹಾನ್ ದೊರೆಗಳ ಜೀವನ, ಸಾಧನೆ ಇಂದಿನವರಿಗೆ ಮಾದರಿಯಾಗಬೇಕಿದೆ. ಇತಿಹಾಸ ಪುರುಷರನ್ನು ನೆನೆಯುತ್ತಾ ಪರಭಾಷೆಗಳಿಂದ ತುಳಿತಕ್ಕೊಳಗಾಗಿರುವ ಕನ್ನಡಿಗರು ಹೊಸ ಇತಿಹಾಸವನ್ನು ಸೃಷ್ಟಿಸಬೇಕಿದೆ. ಕನ್ನಡಿಗರ ಶೌರ್ಯ, ಸ್ವಾಭಿಮಾನ, ಸಂಸ್ಕೃತಿಯನ್ನು ಈ ರಾಜವಂಶಸ್ಥರ ಚರಿತ್ರೆಯಿಂದ ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ.