ಉಚಿತ ಯೋಜನೆಗಳಿಂದ ದೇಶ ಉಳಿಯದು: ಪ್ರೊ.ಕೆ.ಎಸ್.ರಂಗಪ್ಪನಮ್ಮಲ್ಲಿ ಮೇಧಾವಿಗಳು, ಪರಿಣಿತರು, ವಿದ್ಯಾವಂತರೆನಿಸಿಕೊಂಡವರು ಇದ್ದರೂ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ದೇಶ, ರಾಜ್ಯ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಒಳ್ಳೆಯವರು ಇಂತಹ ವಿಷಯಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ದೇಶದ ಭವಿಷ್ಯ ಉಜ್ವಲವಾಗುವುದು ಬಹಳ ಕಷ್ಟವಾಗಲಿದೆ. ಆರ್ಥಿಕವಾಗಿ ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಸನ್ನಿವೇಶ ಸೃಷ್ಟಿಯಾಗಬಹುದು.