ಮಾ.16 ರಿಂದ 21ರವರೆಗೆ ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವಮಳವಳ್ಳಿ ತಾಲೂಕಿನ ಕಂದೇಗಾಲ, ಕಲ್ಲುವೀರನಹಳ್ಳಿ, ಮೊಳೆದೊಡ್ಡಿ, ಅಮೃತೇಶ್ವರನಹಳ್ಳಿ ಗ್ರಾಮಗಳ ಮಧ್ಯ ನೆಲೆಸಿರುವ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನವು ಚರ್ಮದ ರೋಗ ನಿವಾರಕಕ್ಕೆ ಆರಾಧ್ಯ ದೈವ ಎನಿಸಿಕೊಂಡಿದ್ದು, ನಾಡಿನ ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರಿಗೆ ಪ್ರಿಯವಾಗಿದೆ.