ನಾಡಿನ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ: ಎಂ.ಕೆ.ಸೋಮಶೇಖರ್ಬೆಂಗಳೂರಿನಲ್ಲಿ ಐಟಿ- ಬಿಟಿ ಸೆಕ್ಟರ್ ಬೆಳವಣಿಗೆ ಚುರುಕುಗೊಳ್ಳಲು ಕೃಷ್ಣರವರೇ ಕಾರಣ. ಬೆಂಗಳೂರಿನ ವಿಮಾನ ನಿಲ್ದಾಣ, ವಿಕಾಸಸೌಧ ನಿರ್ಮಾಣ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ರೈತರಿಗೆ ಯಶಸ್ವಿನಿ ಯೋಜನೆ, ಹೆಚ್ಚಿನ ವಿದ್ಯುತ್ ಉತ್ಪಾದನೆ, ನೀರಾವರಿ ಆಧುನೀಕರಣ, ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆ, ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ, ಬಿಎಂಟಿಸಿ, ವೋಲ್ವೋ, ಲಕ್ಸುರಿ ಬಸ್ ಗಳ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.