ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮಕ್ಕೆ ಎಸ್.ಶರವಣ ಚಾಲನೆಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳ ಪೈಕಿ ಭಾರತ 2025ರ ವೇಳೆಗೆ ಕ್ಷಯ ಮುಕ್ತ ದೇಶವಾಗಬೇಕೆನ್ನುವ ಗುರಿಯೊಂದಿಗೆ 100 ದಿನಗಳ ಅಭಿಯಾನ ಕಾರ್ಯಕ್ರಮ ರೂಪಿಸಿದೆ. ಡಿ.7ರಂದು ದೇಶಾದ್ಯಂತ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ 99 ದಿನಗಳ ಕಾಲ (2025 ರ ಮಾ. 24, 2025) ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂಬ ಕುರಿತು ಕಾರ್ಯಚಟುವಟಿಕೆ ಪಟ್ಟಿಯನ್ನೇ ಸರ್ಕಾರ ಒದಗಿಸಿದೆ.