ಭಾವನೆಗಳ ಗುಚ್ಚ: ರಜನಿಯವರ ನೂರು ಕವನಗಳ ಸಂಕಲನಇಲ್ಲಿ ನನ್ನೊಲುವೆ, ಜನುಮದಿನ, ಬಾ ನಲ್ಲೆ.., ರವಿಯ ಕಾಂತಿ, ಮನಸು ಕನಸು, ಮಿನುಗುತಾರೆ, ನಲ್ಲನ ನಲ್ಲೆ ಸೇರಿದಂತೆ ಹೆಚ್ಚು ಪ್ರೀತಿ- ಪ್ರೇಮ ಕೇಂದ್ರಿತ ಕವನಗಳೇ ಇವೆ. ಅಕ್ಕರೆಯ ಪಾಕ, ಅಗ್ರಜ. ಬಾಲ್ಯದ ನೆನಪು ಸೇರಿದಂತೆ ಹಲವು ಸಂಬಂಧ ಕುರಿತ ಕವನಗಳು ಇವೆ. ರೈತಾಪಿ, ನನ್ನಾಸೆ, ಕಲ್ಪನೆ, ಆಕಾಂಕ್ಷೆ, ನಿಸರ್ಗ ಸೊಬಗು ಮೊದಲಾದ ಪ್ರಕೃತಿ, ಪರಿಸರ ಕುರಿತ ಕವನಗಳು ಗಮನ ಸೆಳೆಯುತ್ತವೆ. ಸೀತಾಲಕ್ಷ್ಮೀ ವರ್ಮ ಅವರ ಮುನ್ನುಡಿ, ರತ್ನಾ ಹಾಲಪ್ಪಗೌಡ, ಡಾ.ಎಂಜಿಆರ್ ಅರಸು ಅವರ ಬೆನ್ನುಡಿ ಇದೆ.