ಸಾಹಿತ್ಯದ ಓದು ನಮ್ಮನ್ನು ಎಚ್ಚರಿಸಿ, ಸಹಬಾಳ್ವೆಯ ಬದುಕಿಗೆ ಪ್ರೇರೇಪಿಸುತ್ತದೆ: ಪ್ರೊ. ಕವಿತಾ ರೈಜಾನಪದ ಸಾಹಿತ್ಯದಲ್ಲಿ ವರ್ತಮಾನದ ಸ್ಪಂದನೆಯಿತ್ತು, ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾಗಿ ಅಕ್ಷರರಹಿತ ವರ್ಗದ ಅನುಭವದ ಮೇಲೆ ಬೆಳಕು ಚೆಲ್ಲಿತ್ತು. ಶಿಕ್ಷಣದಿಂದ ವಂಚಿತರಾದ ಮಹಿಳೆಯರನ್ನು, ಶೋಷಿತರನ್ನು ಉದ್ದೇಶಿಸಿ ಹಿಂದಿನ ಅಕ್ಷರವಂತರು ಸಾಹಿತ್ಯ ರೂಪಿಸಿರಲಿಲ್ಲ. ಹೀಗಾಗಿಯೇ ಜಾನಪದ ಸಾಹಿತ್ಯ ಭಿನ್ನವಾಗಿ ನಿಲ್ಲುತ್ತದೆ. ವಾಸ್ತವವನ್ನು ತಿಳಿಸುತ್ತದೆ.