ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಲ್ಲಿ ಭಾರೀ ಲೂಟಿ..!ರಾಜ್ಯದೆಲ್ಲೆಡೆ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರಗಳು ಆರಂಭವಾಗಿದ್ದು, ಪಿರಿಯಾಪಟ್ಟಣದ ಕೇಂದ್ರಗಳು ಮಾಫಿಯಾ ಕೈಯಲ್ಲಿ ಸಿಲುಕಿರುವುದು ವಿಪರ್ಯಾಸವಾಗಿದೆ. ರೈತರ ಉದ್ಧಾರಕ್ಕಾಗಿ ರಾಜ್ಯ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಸರ್ಕಾರದ ದೃಷ್ಟಿಯಲ್ಲಿ ಇದು ರೈತರ ಕಲ್ಯಾಣಕೆಂದೇ ಸ್ಥಾಪಿತವಾಗಿರುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.