ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿಸೋಮವಾರದಿಂದ ಜನಗಣತಿ ಆರಂಭವಾಗಿದ್ದು, ಪಂಚಮಸಾಲಿ ಸಮಾಜ ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗದೆ ಉಭಯ ಶ್ರೀಗಳ ಆದೇಶದ ಮೇರೆಗೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ (ಕೋಡ್.ಸಂಖ್ಯೆ ಎ.0868) ಎಂದು ನಮೂದಿಸಿ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪರಮೇಶಪ್ಪ ಹಲಗೇರಿ ಮನವಿ ಮಾಡಿದರು.