ಗ್ರಾಹಕರ ಸೋಗಲ್ಲಿ ಬಂದು ಚಿನ್ನಾಭರಣ ಕದ್ದ ಕಳ್ಳಿಯರು!ಸಂಪತ್ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ, ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ. ಉಡುಗೊರೆ ನೀಡಲು ಚಿನ್ನದ ಉಂಗುರು ಮತ್ತು ಬೆಳ್ಳಿ ದೀಪ ವಿಚಾರಿಸಿಕೊಂಡು ಓರ್ವ ಪುರುಷ, ಮೂವರು ಮಹಿಳೆಯರು ಬಂದಿದ್ದರು. ಕಡಿಮೆ ದರದ ಉಂಗುರ ತೋರಿಸುವಂತೆ ತಿಳಿಸಿದ್ದರಿಂದ ಅಂಗಡಿ ಓನರ್ ಹರ್ಷಬಿ ಸ್ಟೋರ್ ರೂಂಗೆ ತೆರಳಿದ್ದರು. ಅಂಗಡಿಯ ಕೆಲಸದ ಹುಡುಗಿ ಬೆಳ್ಳಿ ದೀಪಗಳನ್ನು ತೋರಿಸುತ್ತಿದ್ದರು. ಈ ಸಂದರ್ಭ ಹಿಂದೆ ನಿಂತಿದ್ದ ಮಹಿಳೆ ಡಿಸ್‌ಪ್ಲೇ ಡ್ರಾದಲ್ಲಿದ್ದ ಆಭರಣಗಳ ಪ್ಲಾಸ್ಟಿಕ್ ಬಾಕ್ಸ್ ತೆಗೆದುಕೊಂಡು ಬ್ಲೌಸ್‌ನೊಳಗೆ ಇಟ್ಟುಕೊಂಡು ಅಲ್ಲಿದ್ದ ಕಾಲ್ಕಿತ್ತಿದ್ದಾರೆ.