ಚಂದ್ರಶೇಖರನ್ ಪ್ರಕರಣ ಸಿಬಿಐ ತನಿಖೆಯಾಗಲಿ: ಪ್ರಣಾವನಂದ ಸ್ವಾಮೀಜಿವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ರು. ಹಗರಣ ನಡೆದಿದೆ. ನಿಗಮದ ಹಣವನ್ನು ಬೇರೆ ರಾಜ್ಯಗಳಿಗೆ ಕಳಿಸುವುದು ಎಂದರೆ ಏನರ್ಥ? ಇದು ಇಲಾಖೆಯ ಎಂಡಿಗೆ ಗೊತ್ತಿರಲಿಲ್ಲವೇ? ಅಥವಾ ಸಚಿವರಿಗೆ ಗೊತ್ತಿಲ್ಲದೇ ಹೇಗೆ ನಡೆಯಲು ಸಾಧ್ಯ? ಎಲ್ಲರೂ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ನಂತಹ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕಾಯಿತು.