ಬೋಧನೆ ಸೇವೆ ಅತ್ಯಂತ ಪವಿತ್ರ: ಬಿಇಒ ನಂಜರಾಜ್ಎಲ್ಲ ಹುದ್ದೆಗಳಿಗಿಂತ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಹಾಗೂ ಪವಿತ್ರವಾದ ಕೆಲಸವಾಗಿದೆ. ತಮ್ಮ ಸೇವಾವಧಿಯಲ್ಲಿ ಶಿಕ್ಷಕನಾಗಿ ಸಾವಿರಾರು ಮಕ್ಕಳಿಗೆ ವಿದ್ಯೆ ಕಲಿಸಿದ್ದು, ಇದು ಪೂರ್ವಜನ್ಮದ ಪುಣ್ಯವೇ ಸರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.