ಗೋಮಾಳ ಜಮೀನು ಉಳಿಸಿ: ಜಿಲ್ಲಾಡಳಿತಕ್ಕೆ ಮಾಗೋಡ ಗ್ರಾಮಸ್ಥರ ಮನವಿರಾಣಿಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ 163 ಎಕರೆ ಗೋಮಾಳ ಜಮೀನನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಜಮೀನು ಉಳಿಸಿ ಹೋರಾಟ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.