ರಾಷ್ಟ್ರಭಕ್ತ ಮತದಾರರಿಂದ ಡಾ.ಸರ್ಜಿ ತಿರಸ್ಕಾರ ಶತಸಿದ್ಧ: ಕೆ.ಎಸ್.ಈಶ್ವರಪ್ಪ ರಘುಪತಿ ಭಟ್ ರಿಗೆ ಈ ಬಾರಿಯ ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಲಿದ್ದು ನನ್ನಂತೆ ರಘುಪತಿ ಭಟ್ಟರಿಗೂ ಅನ್ಯಾಯವಾಗಿದೆ. ಚುನಾವಣೆ ಸಿದ್ಧತೆಗಳ ಮಾಡಿಕೊಳ್ಳಿ ಎಂದು ಆಶ್ವಾಸನೆ ನೀಡಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಧನಂಜಯ್ ಸರ್ಜಿಯವರ ಅಭ್ಯರ್ಥಿ ಎಂದು ಘೋಷಿಸಿರುವುದು, ಬಿಜೆಪಿ ಕಟ್ಟಿದ ಎಲ್ಲ ಪ್ರಾಮಾಣಿಕ ಕಾರ್ಯಕರ್ತರಿಗೆ ನೋವು ತಂದಿದೆ.