ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಿಸಮಾಜದ ವಿಕಾಸ ಹಾವು-ಏಣಿ ಆಟವಿದ್ದಂತೆ. ಹಲವಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ತಳಕ್ಕೆ ಬರುತ್ತಿದ್ದೇವೆ, ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ.