ಮಾಜಿ ಶಾಸಕರಿಂದ ಸಂತ್ರಸ್ತ ರೈತರ ಭೇಟಿ, ಸಾಂತ್ವನಪ್ರಸಕ್ತ ಸಾಲಿನಲ್ಲಿ ತಾಲೂಕಿನ ಹಲವಡೆ ಬಿದ್ದ ಭಾರೀ ಮಳೆಯಿಂದಾಗಿ ನಿಡಗಲ್ ಹೋಬಳಿ ವ್ಯಾಪ್ತಿಯ ಅರಸೀಕೆರೆ, ನ್ಯಾಯದಗುಂಟೆ, ಕದಿರೇಹಳ್ಳಿ, ಕೋಡಿಗೇನಹಳ್ಳಿ ಇತರೆ ಗ್ರಾಮಗಳ ಹಲವು ತೋಟಗಳಲ್ಲಿ ಅಡಿಕೆ,ತೆಂಗು, ಬಾಳೆ ಮತ್ತು ವಿಳ್ಯದೆಲೆ ನಷ್ಟಕ್ಕೀಡಾಗಿವೆ. ಅರಸೀಕೆರೆ ಗ್ರಾಮದ ರೈತ ಪ್ರಕಾಶ್ ರಿಗೆ ಸೇರಿದ್ದ ನೂರಾರು ಅಡಿಕೆ ಹಾಗೂ ಇನ್ನಿತರೆ ಬೆಲೆ ಬಾಳುವ ಮರಗಳು ಧರೆಗುರುಳಿವೆ.