ಪ್ರೊ.ಎಂ.ಮಾದಯ್ಯ ಅವರಿಂದ ಮೈವಿವಿಯಲ್ಲಿ ಶೈಕ್ಷಣಿಕ ಕ್ರಾಂತಿ: ಪ್ರೊ.ಎನ್.ಕೆ.ಲೋಕನಾಥ್ ಬಣ್ಣನೆಮಾನಸ ಗಂಗೋತ್ರಿಯಲ್ಲಿ ಸೆನೆಟ್ ಭವನ, ಗಂಗೋತ್ರಿ ಗ್ಲೇಡ್ಸ್ ನಿರ್ಮಾಣಕ್ಕೆ ಮಾದಯ್ಯ ಅವರು ಕಾರಣ. ಅದೇ ರೀತಿ ಹಾಸನ, ಮಂಡ್ಯ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿ, ಈಗ ಅವು ವಿವಿಗಳಾಗಿವೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕೂಡ ಅವರ ಕುಲಪತಿಯಾಗಿದ್ದ ಅವಧಿಯಲ್ಲಿಯೇ ಮೈಸೂರು ವಿವಿಯಿಂದ ಪ್ರತ್ಯೇಕವಾಗಿ ರಚನೆಯಾಯಿತು. ಆಗ ಪಿಎಚ್.ಡಿ ಮಾಡಲು ಎರಡು ಮಾದರಿ ಇರಲಿಲ್ಲ.