ದೇಶದಲ್ಲಿ ಹಳ್ಳಿಹಳ್ಳಿಗೂ ತಲುಪಿರುವ ಲಯನ್ಸ್ ಕ್ಲಬ್ ಸೇವೆಡಿ.317 ಸಿ ಕಂದಾಯ ಜಿಲ್ಲೆಯು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನು ಒಳಗೊಂಡಿದ್ದು, ವ್ಯಾಪ್ತಿಯಲ್ಲಿನ 118 ಕ್ಲಬ್‌ಗಳಲ್ಲಿ 3160 ಸದಸ್ಯರು 2 ಬ್ಲಡ್ ಬ್ಯಾಂಕ್ ಮೂಲಕ 6600 ಯೂನಿಟ್ ರಕ್ತವನ್ನು ಬಡವರಿಗೆ ಅಶಕ್ತರಿಗೆ ವಿತರಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 7 ಶಿಕ್ಷಣ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಶಿಕಾರಿಪುರದ ಬನಸಿರಿ ಲಯನ್ಸ್ ಎಜುಕೇಷನಲ್ ಸೊಸೈಟಿಯಲ್ಲಿ ನುರಿತ 105 ಶಿಕ್ಷಕರು, 40ಕ್ಕೂ ಅಧಿಕ ಸಿಬ್ಬಂದಿ, 1850ಕ್ಕೂ ಅಧಿಕ ವಿದ್ಯಾರ್ಥಿಗಳ ಬಹು ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಅತ್ಯುತ್ತಮ ಫಲಿತಾಂಶದ ಮೂಲಕ ಮುಂಚೂಣಿಯಲ್ಲಿದೆ ಎಂದು ಪ್ರಶಂಸಿಸಿದರು.