ಮಂಡ್ಯ ಜಿಲ್ಲೆಗೆ ಶೇ.೬೪.೦೫ ಪಠ್ಯಪುಸ್ತಕ ಪೂರೈಕೆಪಠ್ಯ ಪುಸ್ತಕಗಳು ತಾಲೂಕುಗಳಿಗೆ ನೇರವಾಗಿ ಪೂರೈಕೆಯಾಗುತ್ತಿದ್ದು ಬಿಇಒ ಹಂತದ ನೋಡೆಲ್ ಆಧಿಕಾರಿಗಳು ಅವುಗಳನ್ನು ಶಾಲೆಗಳಿಗೆ ಪೂರೈಸುವ ಜವಾಬ್ದಾರಿ ಹೊತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ದಿನಚರಿ ಪುಸ್ತಕಗಳನ್ನು ನೀಡಲಾಗುತ್ತಿದೆ. ೪ ರಿಂದ ೯ನೇ ತರಗತಿಯವರೆಗಿನ ಮಕ್ಕಕಳಿಗೆ ಕನ್ನಡ, ಇಂಗ್ಲಿಷ್, ಗಣಿತ ವಿಷಯದಲ್ಲಿ ಅಭ್ಯಾಸ ಪುಸ್ತಕಗಳನ್ನು ಕೊಡಲಾಗುತ್ತಿತ್ತು. ಅದನ್ನು ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ನೀಡಿರಲಿಲ್ಲ. ಈ ಸಾಲಿನಿಂದ ಅಭ್ಯಾಸ ಪುಸ್ತಕಗಳನ್ನು ನೀಡುತ್ತಿದೆ.