ಹಸಿರು ಮೇವಿನ ಬೀಜಗಳ ಉಚಿತ ಮಿನಿ ಕಿಟ್ ವಿತರಣೆ: ಶಿಮುಲ್ ಎಂಡಿ ಎಸ್.ಜಿ.ಶೇಖರ್ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನೆಲೆ ಮೇವಿನ ಲಭ್ಯತೆ ಕಡಿಮೆಯಾದ್ದರಿಂದ ದುಬಾರಿ ಬೆಲೆ ತೆತ್ತು ಮೇವು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಆರಂಭ ಮುನ್ನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ವಿವಿಧ ಮೇವಿನ ತಳಿಗಳ 3/5 ಕೆ.ಜಿ ಕಿರು ಪೊಟ್ಟಣಗಳನ್ನು (ಮಿನಿ ಕಿಟ್) ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ.