ಡೆಂಘೀ ಪ್ರಕರಣದಲ್ಲಿ ಕಳೆದ ಸಲಕ್ಕಿಂತ ಈ ಬಾರಿ ಶೇ.3 ಹೆಚ್ಚಳ: ತಹಸೀಲ್ದಾರ್ ಮಲ್ಲೇಶ್ ಜನವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 54 ಡೆಂಘೀ ಮತ್ತು 29 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿದ್ದು, ವಿಶೇಷವಾಗಿ ಪಟ್ಟಣದಲ್ಲಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.ಲಾರ್ವ ಸಮೀಕ್ಷೆ ನಡೆಸಿ ಚಿಕ್ಕದಿದ್ದಾಗಲೇ ಸಂಪೂರ್ಣ ನಾಶಪಡಿಸಿ. ಗುಜರಿ ವಸ್ತುಗಳ ಇರುವಿಕೆಗಳ ಪತ್ತೆ ಹಚ್ಚಿ ಸ್ವಚ್ಛ ಮತ್ತು ನಿರ್ಮೂಲನೆಗೊಳಿಸಿ ಟಯರ್ ಎಳನೀರು, ತೆಂಗಿನಕಾಯಿ ಚಿಪ್ಪು ಹಾಗೂ ಆಟದ ಮೈದಾನದ ಅಕ್ಕಪಕ್ಕದ ಗುಂಡಿಗಳಲ್ಲಿ ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.