ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕಾಯುತ್ತಿರುವ ಕಾರವಾರಿಗರು!ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹಲವು ಸಮಸ್ಯೆಗಳು ಬಿಟ್ಟು ಬಿಡದೆ ಕಾಡುತ್ತಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯಭೂಮಿ ಅತಿಕ್ರಮಣದಾರರ ಸಮಸ್ಯೆ.....ಇವುಗಳು ಪರಿಹಾರ ಕಂಡೀತು ಎಂದು ಪ್ರತಿ ಬಾರಿ ವಿಧಾನಮಂಡಳದ ಅಧಿವೇಶನ ಬಂದಾಗಲೂ ಜನತೆ ಚಾತಕಪಕ್ಷಿಯಂತೆ ಕಾಯುತ್ತಾರೆ. ಹೌದು, ಈಗ ಬೆಳಗಾವಿಯ ಅಧಿವೇಶನ ಆರಂಭವಾಗುತ್ತಿದೆ. ಜಿಲ್ಲೆಯ ಜನತೆಯ ಚಿತ್ತ ಬೆಳಗಾವಿ ಅಧಿವೇಶನದತ್ತ ನೆಟ್ಟಿದೆ.