ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಹತ್ಯೆಆಸ್ತಿ ವಿವಾದಕ್ಕೆ ನಡೆಯಿತಾ ಕೃತ್ಯ?: ಮಹೇಶಪ್ಪ ಅವರಿಗೆ ಬೆಳಲಕಟ್ಟೆಯಲ್ಲಿ 3 ಎಕರೆ ಜಮೀನಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರಪ್ಪ ಅವರ ಮಗ ಕಾರ್ತಿಕ್ ನಡುವೆ ಮಹೇಶಪ್ಪ ಅವರಿಗೆ ಜಮೀನು ವಿಚಾರ ಮನಸ್ಥಾಪವಿತ್ತು. ಈ ಮನಸ್ಥಾಪವೇ ಮಹೇಶಪ್ಪ ಅವರನ್ನು ಜೀವಂತ ಸುಡಲು ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸುಟ್ಟ ಗಾಯಗಳಿಂದಾಗಿ ಸಾಯುವ ಮುನ್ನ ಮಹೇಶಪ್ಪ ಹೇಳಿಕೆ ನೀಡಿದ್ದು, ಕುಮಾರಪ್ಪ, ಮಗ ಕಾರ್ತಿಕ್ ಮತ್ತು ಇತರರ ಹೆಸರು ಮಹೇಶಪ್ಪ ಹೇಳಿರುವುದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.