ಕಾರಟಗಿ-ಕನಕಗಿರಿ ತಾಲೂಕು ಅಭಿವೃದ್ಧಿಗೆ ಬದ್ಧಕಾರಟಗಿ-ಕನಕಗಿರಿ ತಾಲೂಕು ಕೇಂದ್ರದಲ್ಲಿ ವಿಳಂಬವಾಗಿರುವ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದ ಸಿದ್ದೇಶ್ವರ ರಂಗಮಂದಿರದಲ್ಲಿ ಜಾಗೃತ ಯುವಕ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ರಾತ್ರಿ ಮಾತನಾಡಿದ ಅವರು, ಪಟ್ಟಣದಲ್ಲಿ ಸೂಕ್ತ ಜಾಗವನ್ನು ಹುಡುಕಿ ತಾಲೂಕು ಆಡಳಿತ ಭವನ, ಸಂಸ್ಕೃತಿ ಭವನ, ನೂರು ಹಾಸಿಗೆಗಳ ಆಸ್ಪತ್ರೆ ಹಾಗೂ ವಿವಿಧ ಕಾಮಗಾರಿಗಳನ್ನು ಪೂರೈಸುವ ಪ್ರಾಮಾಣಿಕವಾಗಿ ಈಡೇರಿಸುವದೇ ನನ್ನ ಗುರಿ. ಕಾರಟಗಿ ಪಟ್ಟಣ ವೇಗವಾಗಿ ಬೆಳಯುತ್ತಿದ್ದು, ವೇಗಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಾಲುತ್ತದೆ ಎಂದರು.