ಸಂಸ್ಕಾರಯುತ ಜೀವನ ಪಾಲನೆ ಇಂದಿನ ಅಗತ್ಯ: ಅಶೋಕ್ ಹಾರ್ನಳ್ಳಿಇತ್ತೀಚೆಗೆ ನಗರ ಪ್ರದೇಶಕ್ಕೆ ವಲಸೆ ಹೋಗುವ ಯುವ ಜನತೆ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಮ್ಮ ಹೆತ್ತವರನ್ನೇ ಮರೆಯುತ್ತಿದ್ದಾರೆ. ತಂದೆ-ತಾಯಿಯ ವೃದ್ಧಾಪ್ಯ ಸಮಯದಲ್ಲಿ, ಮರಣ ಕಾಲದಲ್ಲಿ ಹತ್ತಿರ ಇರದೆ ದೂರದ ಊರಿನಲ್ಲಿ, ಹೊರ ದೇಶದಲ್ಲಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಂಸ್ಕಾರಯುತ ಜೀವನ ಹಾಗೂ ನಮ್ಮ ಧರ್ಮದ ಸಂದೇಶ ಪಾಲನೆ ಮಾಡುವುದು ಕರ್ತವ್ಯವಾಗಿದೆ.