ಸಮಾಜದಲ್ಲಿ ಮಾನವತೆ ಬಿತ್ತಿದ ವಿಶ್ವಮಾನವ ಕನಕದಾಸ: ಡಾ. ಎಂ.ಎಂ. ಮಂಜುನಾಥಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಚನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ವ್ಯವಸ್ಥೆ ರೋಗಗ್ರಸ್ಥವಾಗಿದ್ದ ಹೊತ್ತಿನಲ್ಲಿ ದಿವ್ಯೌಷಧವಾಗಿ ಬಂದವರು ಕನಕದಾಸರು. ಕನ್ನಡದಲ್ಲಿ ಮಹಾಕಾವ್ಯಗಳನ್ನು ಬರೆದರು. ಇಡೀ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಧಾನ್ಯಗಳನ್ನು ಕಾವ್ಯದ ನಾಯಕರಾಗಿಸಿಕೊಂಡರು. ಇದರ ಮೂಲಕ ವರ್ಗ ಸಂಘರ್ಷದ ಕಥನ ತಂದು ಮೇಲು ಕೀಳಿನ ಬೇರುಗಳನ್ನು ಕಿತ್ತರು. ಅವರ ಕಾವ್ಯ, ಕೀರ್ತನೆ, ಉಗಾಬೋಗಾದಿಗಳು, ಮುಂಡಿಗೆಗಳ ಮೂಲಕ ಶ್ರೀಸಾಮಾನ್ಯರಲ್ಲಿ ಅರಿವನ್ನು ಮೂಡಿಸಿ ಸಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾದವರು ಎಂದರು.