ಗೋಣಿಕೊಪ್ಪ ದಸರಾ- ‘ಟೈಮ್ ಅಟೆಕ್ 2023’ ಆಟೋಕ್ರಾಸ್ ಕಾರ್ ರ್ಯಾಲಿಗೆ ಚಾಲನೆಕಾರುಗಳು ದೂಳೆಬ್ಬಿಸುತ್ತ ಸಾಗುತ್ತಿದ್ದಂತೆಯೇ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಜೋರಾಗಿ ಕೇಳಿ ಬರುತ್ತಿತ್ತು. ಸುಂದರ ಪರಿಸರದ ನಡುವೆ ವರ್ಷಂಪ್ರತಿ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್ನ ವತಿಯಿಂದ ಯಶಸ್ವಿಯಾಗಿ ರ್ಯಾಲಿಗಳನ್ನು ಆಯೋಜಿಸುವ ಮೂಲಕ ಕೊಡಗಿನ ಕ್ರೀಡಾಪಟುಗಳಿಗೆ ಹಾಗೂ ಹೊರ ಜಿಲ್ಲೆಯ, ರಾಜ್ಯದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ.