ಆಕಾಶ, ಸಮುದ್ರದಂತೆ ಡಾ.ರಾಜ್ ಕುಮಾರ್‌ಗೆ ಬೇರೆ ಯಾರೂ ಸರಿಸಾಟಿ ಇಲ್ಲ: ಡಾ.ಲತಾ ರಾಜಶೇಖರ್ಸಾಧಾರಣ ಕುಟುಂಬದಲ್ಲಿ ಜನಿಸಿದ ಡಾ. ರಾಜ್ ಅವರು, 4ನೇ ತರಗತಿ ಓದಿದ್ದು, ರಂಗಭೂಮಿಯಲ್ಲಿ ನಟನೆ ಮೂಲಕ ಚಿತ್ರರಂಗಕ್ಕೆ ಬಂದವರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಯಾವುದೇ ಪಾತ್ರ ನೀಡಿದರೂ ಅದರಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ನಟಿಸುತ್ತಿದ್ದರು. ಅವರ ಅಭಿನಯವನ್ನು ಈಗಲೂ ಯಾರು ಮರೆಯಲು ಸಾಧ್ಯವಿಲ್ಲ.