ಪರಿಹಾರ ನೀಡುವಂತೆ ಸಂಸದ ಬೊಮ್ಮಾಯಿಗೆ ಮನವಿತಾಲೂಕಿನಲ್ಲಿ ಅತಿವೃಷ್ಟಿಗೆ ಮುಂಗಾರು ಬೆಳೆಗಳೆಲ್ಲ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ಅವರಿಗೆ ಬೆಳೆ ಹಾನಿ, ಬೆಳೆ ವಿಮೆ ಪರಿಹಾರದೊಂದಿಗೆ ರೈತರು ಮಾಡಿದ ಸಾಲ ಮನ್ನಾ ಮಾಡಬೇಕು ಹಾಗೂ ಬಂದಷ್ಟು ಬೆಳೆ ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿಕ ಸಮಾಜ ಹಾಗೂ ರಾಜ್ಯ ರೈತ ಸಂಘಟನೆ ಸದಸ್ಯರು ಸಂಸದ ಬಸವರಾಜ ಬೊಮ್ಮಾಯಿಗೆ ಬುಧವಾರ ಮನವಿ ಸಲ್ಲಿಸಿದರು.