ದೈವ ಸ್ವರೂಪಳಾದ ಮಹಿಳೆಗೆ ವಿಶೇಷ ಶಕ್ತಿಹೆಣ್ಣು ಮಕ್ಕಳಿಗೆ ವಿಶೇಷವಾದ ಶಕ್ತಿಯಿದೆ. ಅವಳು ದೈವ ಸ್ವರೂಪಗಳು ಎಂಬುವುದನ್ನು ನಮ್ಮ ಸಂಸ್ಕೃತಿ ಎತ್ತಿತೋರಿಸುತ್ತದೆ. ಅವಳು ಸರಸ್ವತಿ, ಲಕ್ಷ್ಮೀ, ದುರ್ಗೆ, ಚಾಮುಂಡಿ ಹೀಗೆ ಎಲ್ಲವೂ ಆಗಿದ್ದಾಳೆ. ಅವಳು ಅಬಲೆ ಅಲ್ಲ, ಸಬಲೆ. ಮಹಿಳೆಯನ್ನು ಗೌಣವಾಗಿ ಕಾಣುವ ಪ್ರಶ್ನೆ ಸಮಾಜದಲ್ಲಿ ಉದ್ಭವಿಸಬಾರದು ಅಷ್ಟೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.