ಗ್ಯಾರಂಟಿಗಳಿಂದ ಎಚ್ .ಡಿ.ಕುಮಾರಸ್ವಾಮಿ ಅವರೇ ದಾರಿ ತಪ್ಪಿದ್ದಾರೆ: ಕೆ.ಎಸ್ .ವಿಮಲಾಮಹಿಳೆಯರು ಬಿಟ್ಟಿ ಭಾಗ್ಯ ಪಡೆದು ದಾರಿ ತಪ್ಪಿದ್ದಾರೆ ಎನ್ನುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು. ಅವರಿಗೆ ವಯಸ್ಸಾಗಿದೆ. ಆರೋಗ್ಯ ಬೇರೆ ಸರಿ ಇಲ್ಲ. ಆರಾಮಾಗಿ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಲಿ. ಮಹಿಳೆಯರ ಬಗ್ಗೆ ಗೌರವವೂ ಇಲ್ಲ. ಬರಗಾಲದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಸ್ವಲ್ಪ ಆಸರೆಯಾಗಿವೆ ಎಂಬ ಕನಿಷ್ಟ ಪ್ರಜ್ಞೆಯೂ ಅವರಲ್ಲಿ ಇಲ್ಲ.