ನೀರಿಗಾಗಿ ಕಣಿವೇ ಬಸವೇಶ್ವರನಿಗೆ ಪೂಜೆಈ ಬಾರಿ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಮಲೆನಾಡು ಜನರು ತತ್ತರಿಸಿ ಹೋಗಿದ್ದು, ದನಕರುಗಳಿಗೂ ಕುಡಿಯಲು ನೀರಿಲ್ಲದೆ ಹಾಹಾಕಾರ ಉಂಟಾಗಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಡೂರು-ಮಂಗಳೂರು ರಸ್ತೆಯ ಪಕ್ಕದ ಗುಡ್ಡದಲ್ಲಿರುವ ಬಸವನಗುಡಿಯ ಕಣಿವೇ ಬಸವೇಶ್ವರನ ಬಳಿ ಮಳೆ ಬರಿಸುವಂತೆ ಮೊರೆ ಹೋಗಿದ್ದರು.