ತಾಯಿಯಂತೆ ಸಾಹಿತಿಗೂ ವೇದನೆ ಅನುಭವವಿದೆ: ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕಮನುಷ್ಯ ಸಂಬಂಧಗಳ ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದಾನೆ. ಆದರೆ, ವೇದನೆ ಹಾಗೂ ಸಂವೇದನೆಗಳನ್ನು ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ. ಪುಸ್ತಕಗಳ ಪ್ರಕಾಶಕರಲ್ಲಿ ಕೆಲವು ಸಮಸ್ಯೆಗಳು ಕಾಡುತ್ತಿದೆ. ಇಲ್ಲಿ ಪುಸ್ತಕ ಮಾರಾಟವಾಗಿಲ್ಲ ಎನ್ನುವುದು ಸಮಸ್ಯೆಯಲ್ಲ. ಆದರೆ, ಹೇಳಲು ಹೊರಟಿರುವ ವಿಚಾರಗಳಿಂದ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ.