ಹಾಲಿವಾಣ ಜಾತ್ರೆಯಲ್ಲಿ ಧರ್ಮ ನಿಂದನೆ, ಪ್ರಾಣಿಬಲಿ ನಿಷೇಧಏ.೧ರಿಂದ ೫ ರವರೆಗೆ ಮಲೇಬೆನ್ನೂರು ಪೋಲೀಸ್ ಠಾಣಾ ಸರಹದ್ದಿನ ಹಾಲಿವಾಣ ಗ್ರಾಮದಲ್ಲಿ ಏಳೂರು ಕರಿಯಮ್ಮದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಹಾಲಿವಾಣ ಗ್ರಾಮದ ಕರಿಯಮ್ಮ ದೇವಾಲಯ ಆವರಣದಲ್ಲಿ ಹರಿಹರ ತಹಸೀಲ್ದಾರ್ ಗುರುಬಸವರಾಜ್ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಅಧೀಕ್ಷಕ ವಿಜಯ್‌ಕುಮಾರ್ ಸಂತೋಷ್, ಗ್ರಾಮಾಂತರ ಉಪಾಧೀಕ್ಷಕ ಪ್ರಶಾಂತ್ ಉಪಸ್ಥಿತಿಯಲ್ಲಿ ಸೌಹಾರ್ದ ಸಭೆ ನಡೆಸಲಾಯಿತು.