ಸಕಲ ಜೀವರಾಶಿ ಸಂರಕ್ಷಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ: ನ್ಯಾಯಾಧೀಶೆ ಜೈಬುನ್ನಿಸಾಭೂಮಂಡಲದ ಶೇ. 70 ಭಾಗ ನೀರಿದೆ. ಆದರೆ ಈ ಪೈಕಿ ಶೇ. 97.5 ರಷ್ಟು ನೀರು ಉಪ್ಪುನೀರು ಆಗಿದೆ. ಶೇ. 1.5 ಭಾಗ ಹಿಮಗಡ್ಡೆಯಾಗಿದ್ದರೆ, ಕೇವಲ ಶೇ. 0.5 ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ಎನಿಸಿಕೊಂಡಿದೆ. ಪರಿಸ್ಥಿತಿ ಹೀಗಿದ್ದರೂ ನಾವು ನೀರಿನ ಬಳಕೆಯನ್ನು ವಿವೇಚನೆಯಿಂದ ಮಾಡುತ್ತಿಲ್ಲ. ಮಹಾ ನಗರಪಾಲಿಕೆಗಳಲ್ಲಿ ನೀರನ್ನು ಲೀಟರ್ ಲೆಕ್ಕದಲ್ಲಿ ಅಳೆದು ಪಡೆಯುವಂತಹ ದುಸ್ಥಿತಿಗೆ ತಲುಪಿದ್ದೇವೆ.