ಶೋಷಿತರ ಉನ್ನತಿಗೆ ದಲಿತ ಚಳವಳಿ ಅವಶ್ಯ-ಸಾಹಿತಿ ಸತೀಶ ಕುಲಕರ್ಣಿಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷಣೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.