ಕಂಪನಿ ಕಟ್ಟಿ 13 ಸಾವಿರ ಜನರಿಗೆ ಉದ್ಯೋಗ ನೀಡುವುದು ಪುಣ್ಯದ ಕೆಲಸ: ನಂಜಾವಧೂತ ಸ್ವಾಮೀಜಿತಾವು ದುಡಿದಿದ್ದನ್ನೆಲ್ಲಾ ಕುಟುಂಬಕ್ಕೇ ಸೀಮಿತವಾಗಿರಿಸದೆ ಸಮಾಜಮುಖಿ ಚಟುವಟಿಕೆಗಳಿಗೆ ಲಾಭಾಂಶದ ಒಂದಷ್ಟು ಭಾಗವನ್ನು ತೆಗೆದಿರಿಸುವುದು ಮಾದರಿ ಕಾರ್‍ಯವಾಗಿದೆ. ತಂದೆ- ತಾಯಿ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ತೆಂಗಿನ ಸಸಿ ವಿತರಣೆ, ಆರೋಗ್ಯ ಶಿಬಿರ, ಉದ್ಯೋಗ ಮೇಳ, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಹಲವರಿಗೆ ನೆರವಾಗಿರುವುದು ಶ್ಲಾಘನೀಯ.