ಫೈಬರ್ ಹಲಗೆ ಸದ್ದಿಗೆ ಮಂಕಾದ ಚರ್ಮದ ವಾದ್ಯಕಲಾದಗಿ: ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ. ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆ ನುಡಿಸುತ್ತಾ ಹೋಳಿ ಸಂಭ್ರಮದಲ್ಲಿದ್ದಾರೆ. ಆದರೆ, ಚರ್ಮದ ಹಲಗೆ ಬದಲಿಗೆ, ಫೈಬರ್ ಹಲಗೆಗಳ ಹಾವಳಿಯೇ ಹೆಚ್ಚಾಗಿದೆ. ಸಾಂಪ್ರದಾಯಿಕ ಮಹತ್ವ ಹೊಂದಿದ್ದ ಚರ್ಮದ ಹಲಗೆಗಳು ನೇಪಥ್ಯಕ್ಕೆ ಸರಿಯುತ್ತಿವೆ.