ದೇಹ, ಮನಸ್ಸಿಗೆ ಸಾಮರ್ಥ್ಯ ತರುವ ಕ್ರೀಡೆ ಪ್ರೋತ್ಸಾಹಿಸಿದೇಹ ಮತ್ತು ಮನಸ್ಸಿಗೆ ಶ್ರಮ ನೀಡದ ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯ ವೃದ್ಧಿಸುವುದಿಲ್ಲ. ಬದಲಾಗಿ ಬದುಕಿನ ದಾರಿಯನ್ನೇ ಕವಲುಗೊಳಿಸುತ್ತವೆ. ಆದ್ದರಿಂದ ಯುವಜನತೆ ಮನಸ್ಸು ಮತ್ತು ದೇಹಕ್ಕೆ ಸಾಮರ್ಥ್ಯ ನೀಡುವ, ಪರಸ್ಪರ ವಿಶ್ವಾಸಕ್ಕೆ ಪೂರಕವಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿ, ಅವುಗಳಲ್ಲಿ ಭಾಗವಹಿಸಬೇಕು ಎಂದು ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್. ಗಣಪತಿ ಸೊರಬದಲ್ಲಿ ಹೇಳಿದ್ದಾರೆ.